ಬೃಹತ್ ಮೊತ್ತವನ್ನು ಭೇದಿಸದ ಕೆ ಎಲ್ ರಾಹುಲ್ ಪಡೆ ಸಿ ಎಸ್ ಕೆಗೆ ಶರಣು. L S G ಅನ್ನು ಸೋಲಿಸುವ ಮೂಲಕ ತಮ್ಮ ಖಾತೆಯನ್ನು ಆರಂಭಿಸಿದ C S K ತಂಡ.

ಮೊದಲಿಗೆ ಬೌಲಿಂಗ್ ನಿಂದ ಆರಂಭ ಮಾಡಿದ ಕೆ ಎಲ್ ರಾಹುಲ್ ಪಡೆಗೆ ಸಿಎಸ್‌ಕೆ ತಂಡದ ಆರಂಭಿಕರಾದ ಗಾಯಕ್ವಾಡ್ ಮತ್ತು ಡಿವೈನ್ ಕಾನ್ವೆರವರು ಸ್ಪೋಟಕ ದಾಳಿ ಮಾಡುವ ಮೂಲಕ ಆರಂಭದಲ್ಲಿ ಎಲ್ ಎಸ್ ಜಿ ತಂಡದ ಬೌಲರ್ ಗಳನ್ನು ಗಲಿಬಿಲಿ ಗೊಳಿಸಿದರು. 9.1 ಒವರ್ನಲ್ಲಿ ಗಾಯಕ್ವಾಡ್ ವಿಕೆಟ್ ಅನ್ನು ತೆಗೆದುಕೊಳ್ಳುವ ಮೂಲಕ ಜೊತೆಯಾಟ ಕಡಿವಾಣ ಯಶಸ್ವಿ ಕಂಡರು . 10.2 ಓವರ್ನಲ್ಲಿ ಕಾನ್ವೆರವರ ವಿಕೆಟನ್ನು ಕಬಳಿಸಿದರು. ಎಲ್ ಎಸ್ ಜಿ ತಂಡವು ರನ್ಗಳಿಗೆ ಕಡಿವಾಣ ಹಾಕಲು ಪ್ರಯತ್ನಿಸಿದರು. ಆದರೆ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗಿಗೆ ಬಂದ ಶಿವಂ ದುಬೆರವರು ಸ್ಪೋಟಕ ಸಿಕ್ಸರ್ ಗಳನ್ನು ಸೇರಿಸಿ ಆರ್ಭಟ ಆರಂಭಿಸುವ ಮುನ್ನವೇ ವಿಕೆಟ್ ಅನ್ನು ಕೈ ಚೆಲ್ಲಿ ಪೆವಿಲಿಯನ್ ತೆರಳಿದರು. ನಾಲ್ಕನೇ ಕ್ರಮಾಂಕದಲ್ಲಿ ಬಂದಂತಹ ಮೋಹಿನ್ ಅಲಿ ಕೂಡ ಕೇವಲ 19 ರನ್ನು ಗಳಿಸಿ ಪೆವಿಲಿಯನ್ ಕಡೆ ಮುಖ ಮಾಡಿದರು. 5ನೇ ಕ್ರಮಾಂಕದಲ್ಲಿ ಬಂದಂತಹ ಇಂಗ್ಲೆಂಡ್ ನ ಸ್ಟಾರ್ ಆಲ್ ರೌಂಡರ್ ಸ್ಟೋಕ್ಸ ರವರನ್ನು ಮಿಂಚಿನಂತೆ ಪೆವಿಲಿಯನಗೆ ಕಳಿಸಿದರು. ನಂತರ ಬಂದಂತಹ ರಾಯುಡು ರವರು ಬ್ಯಾಟಿಂಗ್ನಲ್ಲಿ ತಮ್ಮದೇ ಆದ ಚಾಪು ಮೂಡಿಸುವ ಮೂಲಕ ತಂಡ 217 ಕಲೆ ಹಾಕುವಂತೆ ಮಾಡಿ ಅಜೇಯರಾಗಿ ಉಳಿದರು. 7 ಮತ್ತು 8 ಕ್ರಮಾಂಕದಲ್ಲಿ ಬಂದಂತಹ ಧೋನಿ ಮತ್ತು ಜಡೇಜಾ ರವರು ಬ್ಯಾಟಿಂಗ್ ನಲ್ಲಿ ಪ್ರದರ್ಶನ ತೋರಲು ಸಾಧ್ಯವಾಗಲಿಲ್ಲ. ಸಿ ಎಸ್ ಕೆ ತಂಡದ ಆರಂಭಿಕರು ಕೊಟ್ಟಂತಹ ಅದ್ಭುತ ಅಡಿಪಾಯದಿಂದ C S K ತಂಡವು ದೊಡ್ಡ ಮೊತ್ತ ಕಲೆ ಹಾಕುವಲ್ಲಿ ಯಶಸ್ವಿ ಕಂಡಿತು.ಬೃಹತ್ ಮೊತ್ತವನ್ನು ಬೆನ್ನು ಹತ್ತಿದ ಎಲ್‌ಐಜಿ ತಂಡದ ಆರಂಭಿಕರಾದ ಕೆ ಎಲ್ ರಾಹುಲ್ ಮತ್ತು ಮೇಯರ್ಸ್ ರವರು ಅದ್ಭುತವಾದ ಆರಂಭ ನೀಡಿದರು.ಆದರೆ ನಂತರ ಬಂದ ಬ್ಯಾಟರಗಳು ಯಶಸ್ವಿಯನ್ನು ಕಾಣಲಿಲ್ಲ.ಕೊನೆಯಲ್ಲಿ ಬಂದ ಬಡೋನಿ ಮತ್ತು ಕೃಷ್ಣಪ್ಪ ಗೌತಮ್ ರವರು ಪ್ರದರ್ಶನವನ್ನು ನೀಡಿದರು ಸಹ ತಂಡವನ್ನು ಗೆಲುವಿನತ್ತ ಮುಖ ಮಾಡಲು ಸಾಧ್ಯವಾಗಲಿಲ್ಲ
